Wednesday, February 6, 2008

Mumbai Yaksha Sangeetha Details/ ಮುಂಬಯಿಯಲ್ಲಿ ಮೊದಲ ಕಾರ್ಯಕ್ರಮ:concept:Shekar Ajekar

ಮುಂಬಯಿಯಲ್ಲಿ ಮೊದಲ ಕಾರ್ಯಕ್ರಮ:
ವ್ಯವಸ್ಥಾಪಕರು, ಕರ್ನಾಟಕ ಸಂಘಸ್ಥಳ : ವಿಶ್ವೇಶ್ವರಯ್ಯ ಸಭಾಗೃಹ, ಕನ್ನಡ ಸಂಘ, ಮುಂಬಯಿ
ಸಮಯ : ಬೆಳಿಗ್ಗೆ ೧೧.೫೫ರಿಂದ ೧೨.೦೫ ದಿನಾಂಕ: ೦೩-೦೨-೨೦೦೮/3-02-2008
ಗಣ್ಯರ ಉಪಸ್ಥಿತಿ : ಪುರುಷೋತ್ತಮ ಬಿಳಿಮಲೆ, ನಟರಾಜ್ ಹುಳಿಯೂರ್, ಎಸ್. ದಿವಾಕರ್, ಕೆ.ಟಿ. ವೇಣುಗೋಪಾಲ್, ಡಾ ಸುನೀತಾ ಶೆಟ್ಟಿ, ತುಳಸಿ ವೇಣುಗೋಪಾಲ್, ಎಚ್.ಬಿ.ಎಲ್.ರಾವ್, ಶ್ರೀನಿವಾಸ್ ಜೋಕಟ್ಟೆ, ಭರತ್ ಕುಮಾರ್ ಪೊಲಿಪು, ಓಂದಾಸ್ ಕಣ್ಣಂಗಾರ್ ಮತ್ತಿತರರು.
ಕಾರ್ಯಕ್ರಮ -2 ಸ್ಥಳ : ಪೇಜಾವರ ಮಠ, ಸಾಂತಾಕ್ರೂಜ್ಸ ಮಯ : ೪.೩೦ ಸಂಜೆ ೫.೩೦
ವ್ಯವಸ್ಥಾಪಕರು : ಕೆರ್ವಾಶೆ ಗ್ರಾಮಸ್ಥರ ಸಮಿತಿ, ಮುಂಬಯಿ
ಕ್ಯಾ. ಗಣೇಶ್ ಕಾರ್ಣಿಕ್ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ :
ಗಣ್ಯರ ಉಪಸ್ಥತಿ : ಹರಿದಾಸ್ ಭಟ್ಟ ಪೆರ್ಣಂಕಿಲ, ದಯಾನಾಯಕ್, ಶಿವರಾಮ ಜಿ.ಶೆಟ್ಟಿ, ಕೈರಂಗಳ ವಿಶ್ವನಾಥ ಭಟ್ಟ,
ಎಸ್.ಕೆ. ಬಂಗೇರ, ಶೇಖರ ಶೆಟ್ಟಿಗಾರ್, ಎಚ್.ಬಿ.ಎಲ್. ರಾವ್, ಶ್ರೀ ಹರಿ ಮತ್ತು ಕ್ಯಾ. ಗಣೇಶ್ ಕಾರ್ಣಿಕ್.
ಕಾರ್ಯಕ್ರಮ-3 ವ್ಯವಸ್ಥಾಪಕರು: ಕಾರಿಘರ್ ಕನ್ನಡ ಸಂಘ, ಕಾರಿಘರ್ ನ್ಯೂ ಬಾಂಬೆ
ಳ : ಕಮ್ಯೂನಿಟಿಹಾಲ್, ರೇಲ್ ವಿಹಾರ್, ಕಾರಿಘರ್ ಸಮಯ : ರಾತ್ರಿ ೯.೧೫ ರಿಂದ ೧೦.೦೫ಗಣ್ಯರ ಉಪಸ್ಥಿತಿ : ರಮೇಶ್ ಶೆಟ್ಟಿ, ಡಾ ಸಂಜೀವ ಶೆಟ್ಟಿ, ವಿ.ಕೆ. ಸುವರ್ಣ ಅನಿಲ್ ಪೆರ್ಡೂರ್, ಡಿ.ಪಿ.ಭಟ್ ಮತ್ತಿತರರುಫೆ.೩ ಮುಂಬಯಿ
ಯಕ್ಷ ಸಂಗೀತಅಭಿಪ್ರಾಯಗಳು
ನಾನು ಕಂಡು, ಅನುಭವಿಸಿ ಆನಂದಿಸಿದ ಪ್ರಥಮ ಪ್ರದರ್ಶನವಿದು; ಮೇಲಾಗಿ ಇದು ಮುಂಬಯಿಗೆ ಹೊಸತು.
ಯಕ್ಷಗಾನ ಕಲೆಯನ್ನು ಅತಿಯಾಗಿ ಮೆಚ್ಚುವ ನನ್ನಂಥ ಕನ್ನಡಿಗರಿಗೆ ಕನ್ನಡ-ತುಳು ಕವಿತೆಗಳು ಯಕ್ಷಗಾನದಾಚೆಗೆ ಒಗ್ಗಿಕೊಳ್ಳುವ, ಹಾಗೆ ಒಗ್ಗಿಸಿಕೊಳ್ಳುವ ವಿಧಾನವೇ ಪ್ರಶಂಸನೀಯವೆನಿಸಿತು. ಭಾಗವತನ ಸಿರಿಕಂಠ, ಮದ್ದಳೆಯ ಸುನಾದ, ಚೆಂಡೆಯ ಕೈಚಳಕ ಇವುಗಳ ತ್ರಿವೇಣಿ ಸಂಗಮ ಮೋಹಕವಾಗಿತ್ತು. ತುಳುನಾಡಿನ ಕಲಾವಿದರು ಇನ್ನಷ್ಟು ತುಳುಗೀತೆಯನ್ನು ಹಾಡುವಂತಾಗಬೇಕೆಂದು ನನ್ನ ಅಂತರಾಳದ ಬಯಕೆ. ರಾಗ, ತಾಳ, ಜ್ಞಾನವಿಲ್ಲದವರಿಗಾಗಿ ಪ್ರತಿ ಹಾಡಿಗೆ ಅನ್ವಯಿಸಿಕೊಂಡ ಈ ಬಗೆಯನ್ನೂ ತಿಳಿಸಿಕೊಟ್ಟರೆ ಒಂದು ಹಾಡಿನಿಂದ ಇನ್ನೊಂದು ಹಾಡಿಗೆ ದಾಟಿಸಿಕೊಳ್ಳುವ ರಾಗ ತರಂಗಗಳು ತಟ್ಟುವಂತಾಗಬಹುದು.ಶುಭ ಹಾರೈಸಿದ್ದೇನೆ.-
ಡಾ ಸುನೀತಾ ಶೆಟ್ಟಿ-ಮುಂಬಯಿ

ಭಾವಗೀತೆಗಳನ್ನು ಯಕ್ಷಗಾನ ಸಂಗೀತಕ್ಕೆ ಅಳವಡಿಸಿಕೊಂಡು ಯುವ ಪ್ರತಿಭಾ ವೇದಿಕೆ ಕರ್ನಾಟಕ ಸಂಘದ ಸಾಹಿತ್ಯ-ಸಂಸ್ಕೃತಿ ಸಂಭ್ರಮ-೨೦೦೮ ಸಮಾರಂಭದಲ್ಲಿ ಪ್ರಸ್ತುತ ಪಡಿಸಿದ ಕಾರ್ಯಕ್ರಮ ಅದ್ಭುತವಾಗಿತ್ತು. ಸಂಯೋಜಕ, ಪತ್ರಕರ್ತ ಗೆಳೆಯ ಶೇಖರ ಅಜೆಕಾರು ಮತ್ತು ಸಂಗಡಿಗರಿಗೆ ಅಭಿನಂದನೆಗಳು.-
- ಕೆ.ಜೆ. ವೇಣುಗೋಪಾಲ್, ಪತ್ರಕರ್ತರು ಮುಂಬಯಿ.

ಯಕ್ಷ ಸಂಗೀತಕ್ಕೆ ಕನ್ನಡ ಕವನಗಳನ್ನು ಅಳವಡಿಸಿರುವ ರೀತಿ ಕುತೂಹಲಕರವಾಗಿದೆ. ಈ ರೀತಿಯ ಪ್ರಯೋಗಗಳೇ ನಮ್ಮ ಆಶಾವದವನ್ನು ಹೆಚ್ಚಿಸುತ್ತವೆ. ನಿಮ್ಮ ಸೃಜನಶೀಲ ಪ್ರಯತ್ನ ಅತ್ಯಂತ ಅಭಿನಂದನಾರ್ಹವಾಗಿದೆ.- ನಟರಾಜ್ ಹುಳಿಯೂರ್, ಬೆಂಗಳೂರುಇಂದು ಶೇಖರ ಅಜೆಕಾರು ನಡೆಸಿದ ಯಕ್ಷಸಂಗೀತ ಅತ್ಯುತ್ತಮ ರೀತಿಯಲ್ಲಿ ಜರಗಿತು, ಮುಂಬಯಿಯವರಿಗೆ ಈ ಪ್ರಯೋಗ ಹೊಸತಾಗಿದ್ದರೂ - ಕೇಳಲು ಅತಿ ಮಧುರವಾಗಿಯೂ- ಅರ್ಥಪೂರ್ಣವಾಗಿಯೂ ಇತ್ತು.-
ಬಾಲ ಕೃಷ್ಣ ನಿಡ್ವಣ್ಣಾಯ,ಮುಂಬಯಿ

ಹೊಸದಾಗಿ ನೋಡುವುದು, ಬಹಳ ಉತ್ತಮವಾಗಿತ್ತು-
ಪಿ.ಕೆ. ಸಾಲಿಯಾನ್, ಮುಂಬಯಿ

ಸಂಗೀತದ ಪ್ರಯೋಗವನ್ನು ಆಸಕ್ತಿಯಿಂದ ಗಮನಿಸಿದ್ದೇನೆ. ಕನ್ನಡ ಕವಿಗಳ ರಚನೆಗಳನ್ನು ಯಕ್ಷಗಾನ ಹಾಡುಗಾರಿಕೆಯ ಮೂಲಕ ಪ್ರತೀತಗೊಳಿಸುವ ವಿಶಿಷ್ಟ ಪ್ರಯತ್ನವನ್ನು ನಾನು ಮೆಚ್ಚಿಕೊಂಡಿದ್ದೇನೆ. ತೆಂಕುತಿಟ್ಟು ಭಾಗವತಿಕೆಯಲ್ಲಿ ಇಂಥ ಪ್ರಯೋಗ ನಡೆಸಬಹುದೇ?
- ಡಾ ಪುರುಷೋತ್ತಮ ಬಿಳಿಮಳೆ., ನವದೆಹಲಿ

Concept by :Shekara Ajekar

ಮುಂಬಯಿಯಲ್ಲಿ ಮಿಂಚಿದ ಯಕ್ಷ ಸಂಗೀತ/Yaksha Sangeetha hits at Mumbai-Shekar Ajekar

ಮುಂಬಯಿಯಲ್ಲಿ ಮಿಂಚಿದ ಯಕ್ಷ ಸಂಗೀತ
ಮುಂಬಯಿಯ ಕರ್ನಾಟಕ ಸಂಘ ಫೆಬ್ರವರಿ ೩ ರಂದು ಏರ್ಪಡಿಸಿದ್ದ ಸಾಹಿತ್ಯ-ಸಂಸ್ಕೃತಿ-ಸಂಭ್ರಮ-೨೦೦೮ ಈ ಕಾರ್ಯಕ್ರಮದಲ್ಲಿ ಯಕ್ಷ ಸಂಗೀತ ಅವಕಾಶ ಪಡೆದಿದ್ದು ಮುಂಬಯಿಯ ಸಂಗೀತಾಸಕ್ತರ ಮನ ಸೊರೆಗೊಂಡಿದೆ.
ಜಾಗತೀಕರಣ, ಖಾಸಗೀಕರಣ, ಉದಾರೀಕರಣದಿಂದ ಉಂಟಾದ ಸೃಜನಶೀಲತೆಯ ಆತಂಕಗಳಿಗೆ ಯಕ್ಷ ಸಂಗೀತ ಉತ್ತರವಾಗಬಲ್ಲುದು ಎಂದು ಖ್ಯಾತ ವಿಮರ್ಶಕ, ಲೇಖಕ ನಟರಾಜ್ ಹುಳಿಯಾರ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಪತ್ರಕರ್ತ ಶೇಖರ ಅಜೆಕಾರು ಅವರ ಪರಿಕಲ್ಪನೆ-ನಿರೂಪಣೆ-ನಿರ್ದೇಶನದಲ್ಲಿ ಯುವ ಪ್ರತಿಭಾ ವೇದಿಕೆ ತಂಡ ಸಮರ್ಪಿಸಿದ ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ-ಖ್ಯಾತ ಕವಿಗಳ ಗೀತೆಗಳನ್ನು ಯಕ್ಷಗಾನೀಯವಾಗಿ ಹಾಡಲಾಯಿತು. ಫೆ.೩ರ ಒಂದೇ ದಿನ ಮೂರು ಕಾರ್ಯಕ್ರಮಗಳನ್ನು ಮುಂಬಯಿಯ ವಿವಿದೆಡೆ ಸಾದರ ಪಡಿಸಲಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ್ ಕುಮಾರ್ ಹೆಬ್ರಿ, ಮದ್ದಳೆಯಲ್ಲಿ ಸುನೀಲ್ ಭಂಡಾರಿ ಕಡತೋಕ ಮತ್ತು ಚೆಂಡೆಯಲ್ಲಿ ಕೃಷ್ಣ ಸಂತೆಕಟ್ಟೆ ಸಹಕರಿಸಿದರು. ಒಂದೇ ಕಾರ್ಯಕ್ರಮದಲ್ಲಿ ಯಾವುದೇ ರಾಗಗಳನ್ನು ಪುನರಾವರ್ತಿಸದಂತೆ ಯಕ್ಷಗಾನ ಪ್ರದರ್ಶನದ ರಾಗ ಅನುಕ್ರಮಣಿಕೆಯಂತೆ ರಾಗ ಮಾಲಿಕೆಯನ್ನು ಸಂಯೋಜಿಸಲಾಗಿತ್ತು.ಸಾಮಗರ ಸಂಯಮಂ ತಂಡದ ತಾಳ ಮದ್ದಳೆ ತಿರುಗಾಟದ ಪ್ರಧಾನ ಭಾಗವತರಾಗಿ ಅನುಭವವುಳ್ಳ ಗಣೇಶ್ ಸಂಗೀತಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು. ಗೀತೆಯ ಮಹತ್ವಕ್ಕೆ ಹೊಂದುವಂತೆ, ಯಕ್ಷ ಸಂಗೀತಕ್ಕೆ ಒಪ್ಪುವಂತೆ ಒಂದು-ಎರಡು ಮದ್ದಳೆ ಬಾರಿಸಿ ಸುನೀಲ್ ಗಮನ ಸೆಳೆದರು. ಮುಂಬಯಿ ಕನ್ನಡಿಗರ ಸಾಧನೆ, ಕನ್ನಡ ಉಳಿಸಲು ಪಟ್ಟ ಶ್ರಮ ಸಹಿತ ವಿವರಗಳೊಂದಿಗೆ ಸರಳ, ಚುಟುಕಿನ ನಿರೂಪಣೆಯಿತ್ತು. ಆರಂಭದಿಂದ ಸಹಕರಿಸಿದ ಸಂಘಟಕರು, ಭಾಗವಹಿಸಿದ ಕಲಾವಿದರನ್ನು ಸ್ಮರಿಸಲಾಯಿತು.
ಹಾಡಿದ ಗೀತೆಗಳು.................. ತಾಳ............. ವಿವರಗಳು
ಮುಂಬಯಿಯ ತಿರುಗಾಟದ ಪ್ರಮುಖ ಪದ್ಯಗಳು
#ಎಂಚಿತ್ತಿ ಮಗನ್ ಪಡೆಯೊಳ್ ಪಾರ್ವತೀ ರಚನೆ: ಅಮೃತ ಸೋಮೇಶ್ವರ,- ಭೀಮ್‌ಫಲಾಸ್ -ಅಷ್ಟತಾಳ #ಭರತಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು, ರಚನೆ: ಕುವೆಂಪು - ಸಾರಾಮತಿ ರಾಗ - ಏಕತಾಳ
#ನಟನವಾಡಿದಳ್ ತರುಣಿ, ರಚನೆ: ಡಿ.ವಿ.ಜಿ. ಆರಭಿರಾಗ, ತಾಳ - ಆದಿ/ಕೋರೆಓ
#ನನ್ನ ಚೇತನ, ರಚನೆ: ರಾಷ್ಟ್ರಕವಿ ಕುವೆಂಪು, ರಾಗ - ಹಿಂದೋಳ ರೂಪಕ ತಾಳ
#ಕರುಣಾಳು ಬಾ ಬೆಳಕೆ, ರಚನೆ: ಬಿ.ಎಂ. ಶ್ರೀ. ಕಂಠಯ್ಯ, ರಾಗ- ಸೌರಾಷ್ಟ್ರ ತಾಳ: ಝಂಪೆ:ಬಾರೆ
#ನನ್ನ ದೀಪಿಕಾ, ರಚನೆ: ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ, ರಾಗ ಕಲಾವತಿ - ರೂಪಕ ತಾಳ
#ಹಾಡು ಹಳೆಯದಾದರೇನು? ರಚನೆ: ಡಾ ಜಿ.ಎಸ್.ಶಿವ ರುದ್ರಪ್ಪ, ರಾಗ: ಷಣ್ಮುಖಪ್ರಿಯ ತಾಳ - ತ್ರಿವುಡೆ
#ಪ್ರೀತಿ ಕೊಟ್ಟ ರಾಧೆಗೆ, ರಚನೆ: ಎಚ್.ಎಸ್.ವೆಂಕಟೇಶ ಮೂರ್ತಿ, ರಾಗ: ದನ್ಯಾಸಿ, ಏಕತಾಳ
#ಎದೆ ತುಂಬಿ ಹಾಡಿದೆನು, ರಚನೆ: ರಾಷ್ಟ್ರಕವಿ ಡಾಜಿ.ಎಸ್.ಶಿವರುದ್ರಪ್ಪ, ರಾಗ-ತುಜಾವಂತ್, ತಾಳ-ಝಂಪೆಯಾವ
#ಮೋಹನ ಮುರಳಿ ಕರೆಯಿತೋ, ರಚನೆ: ಗೋಪಾಲಕೃಷ್ಣ ಅಡಿಗ, ರಾಗ - ಮೋಹನ ತಾಳ ತ್ರಿವುಡೆ.
#ಬಸವಣ್ಣನ ಎರಡು ವಚನಗಳು: ಇವನಾರವ ಇವನಾರವ ಎಣ್ಣಿಸಿದಿರಯ್ಯ ಮತ್ತು ನು ದರೆ ಮುತ್ತಿನ ಹಾರದಂತಿರಬೇಕು

Friday, February 1, 2008

Yaksha Sangeetha Participation/ಯಕ್ಷ ಸಂಗೀತದಲ್ಲಿ ಪಾಲ್ಗೊಂಡವರು- by Shekar Ajekar

ಯಕ್ಷ ಸಂಗೀತದಲ್ಲಿ ಪಾಲ್ಗೊಂಡವರು
ಯಕ್ಷ ಸಂಗೀತದಲ್ಲಿ ಪಾಲ್ಗೊಂಡವರು ಕೆ.ಜೆ. ಗಣೇಶ್, ಕೆ.ಜೆ. ಕೃಷ್ಣ, ಕೆ.ಜೆ. ಸುದೀಂದ್ರ, ಸುಬ್ರಮಣ್ಯ, ಗಣೇಶ್ ಭಂಡಾರಿ, ರಮಾಕಾಂತ್ ಭಟ್, ಸತೀಶ್ ಉಪಾಧ್ಯಾಯ, ಗುಂಡ್ಮಿ ರಘುರಾಮ್, ಸುದರ್ಶನ ಉರಾಳ, ಗಣೇಶ್ ಕುಮಾರ್ ಹೆಬ್ರಿ, ಮತ್ತು ನಾರಾಯಣ ಶಬರಾಯ.
ಕೃತಜ್ಞತೆಗಳು:ಡಾ ಎಂ ಭೈರೇ ಗೌಡ, ಯಕ್ಷದೇಗುಲ ಮೋಹನ್ , ಮಡಿಕೇರಿ ಚೆದ್ವಿದಾಸ್, ಕರ್ನಾಟಕ ಕಲಾದರ್ಶಿನಿ ಶ್ರೀನಿವಾಸ್ ಮೂಡಬಿದ್ರೆ ಸಾಹಿತ್ಯ ಸಮ್ಮೇಳನ ಸಮಿತಿ. ಪ್ರಕಾಶ್ ಕನಕಪುರ ಕರ್ನಾಟಕ ಸಂಘ, ಮುಂಬಯಿ........................ ಮತ್ತು ನೀವು

Yaksha Sangeetha Participation/ಯಕ್ಷ ಸಂಗೀತದಲ್ಲಿ ಪಾಲ್ಗೊಂಡವರು- by Shekar Ajekar

ಯಕ್ಷ ಸಂಗೀತದಲ್ಲಿ ಪಾಲ್ಗೊಂಡವರು
ಕೆ.ಜೆ. ಗಣೇಶ್, ಕೆ.ಜೆ. ಕೃಷ್ಣ, ಕೆ.ಜೆ. ಸುದೀಂದ್ರ,
ಸುಬ್ರಮಣ್ಯ, ಗಣೇಶ್ ಭಂಡಾರಿ, ರಮಾಕಾಂತ್ ಭಟ್ ಸತೀಶ್ ಉಪಾಧ್ಯಾಯ,
ಗುಂಡ್ಮಿ ರಘುರಾಮ್, ಸುದರ್ಶನ ಉರಾಳ, ಗಣೇಶ್ ಕುಮಾರ್ ಹೆಬ್ರಿ, ಮತ್ತು ನಾರಾಯಣ ಶಬರಾಯ
ಕೃತಜ್ಞತೆಗಳು:ಡಾ ಎಂ ಭೈರೇ ಗೌಡ, ಯಕ್ಷದೇಗುಲ ಮೋಹನ್ , ಮಡಿಕೇರಿ ಚೆದ್ವಿದಾಸ್, ಕರ್ನಾಟಕ ಕಲಾದರ್ಶಿನಿ ಶ್ರೀನಿವಾಸ್ ಮೂಡಬಿದ್ರೆ ಸಾಹಿತ್ಯ ಸಮ್ಮೇಳನ ಸಮಿತಿ. ಪ್ರಕಾಶ್ ಕನಕಪುರ, ಕರ್ನಾಟಕ ಸಂಘ, ಮುಂಬಯಿ........................ ಮತ್ತು ನೀವು.

Mumbai programme Direction -Shekar Ajekar 3rd Feb

Mumbai Programme on 3rd Feb at Visweswarayya Hall Matunga:Direction and concept Shekar Ajekar Artists: Ganesh Kumar Hebri/Sunil/Krishna Santhekatte
ಕಲಾವಿದರುಭಾಗವತರು : ಗಣೇಶ್ ಕುಮಾರ್ ಹೆಬ್ರಿ,ಖ್ಯಾತ ಯುವ ಭಾಗವತ ಗಣೇಶ್ ಸಂಯಮಂತಾಳ-ಮದ್ದಳೆ ತಂಡದಲ್ಲಿ ಮುಖ್ಯ ಭಾಗವತರಾಗಿ ತಿರುಗಾಟ ನಡೆಸಿದವರು. ಉದಯ ಟಿ.ವಿ.ಯಲ್ಲಿ ಪ್ರಸಾರವಾದ ಶನೀಶ್ವರ ಯಕ್ಷ ದಾರವಾಹಿಯ ಭಾಗವತರು. ಆಕಾಶವಾಣಿ ಕಲಾವಿದರು. ಯಕ್ಷ ಮಂಡಲ, ಸರಸ್ವತಿ ನಾರಾಯಣ ಸೇವಾ ಸಂಘಗಳ ಸಕ್ರಿಯ ಸದಸ್ಯರು, ನವೋದಯ ಶಾಲೆಗಳ ಯಕ್ಷಗಾನ ಗುರುಗಳು, ಕರ್ನಾಟಕದಲ್ಲೆಡೆ ಪ್ರವಾಸ ಮಾಡಿದ್ದಾರೆ.
ಮದ್ದಳೆ: ಸುನೀಲ್-ಮದ್ದಳೆಯ ನಿನಾದಕ್ಕೆ ಸಂಗೀತದ ಒನಪು ನೀಡಬಲ್ಲ ಸುನೀಲ್, ಮೇಳದ ತಿರುಗಾಟದ ಅನುಭವವುಳ್ಳವರು
ಚೆಂಡೆ: ಕೃಷ್ಣ ಸಂತೆಕಟ್ಟೆ,
ಮೇಳದ ತಿರುಗಾಟದ ಅನುಭವವುಳ್ಳ ಯುವ ಹಿಮ್ಮೇಳ ಪ್ರತಿಭೆ.