Friday, February 1, 2008

What is Yakshasangeetha?/ಯಕ್ಷ ಸಂಗೀತ.......?

ಯಕ್ಷ ಸಂಗೀತ.......?
ಯಕ್ಷಗಾನ ಕರಾವಳಿ ಕರ್ನಾಟಕದಲ್ಲಿ ಹುಟ್ಟಿ ಗಡಿದಾಟಿ ಬೆಳೆದ ಪ್ರಸಿದ್ಧ ಕಲಾ ಪ್ರಕಾರ. ಅದಕ್ಕೆ ಅದರದೇ ಆದ ಸುಂದರ ಚೌಕಟ್ಟು ಇದೆ. ಯಕ್ಷಗಾನ ಪ್ರದರ್ಶನದಲ್ಲಿ ಡೊಂಬರಾಟ ಸಲ್ಲದು. ಆದರೆ, ಪ್ರತ್ಯೇಕ ಪ್ರಯೋಗಗಳಿಗೆ ಸ್ವಾಗತ. ನೃತ್ಯ ಸಂಬಂಧಿ ಪ್ರಯೋಗಗಳು ಈಗಾಗಲೇ ಯಶಸ್ವಿಯಾಗಿವೆ. ಸಾಂಪ್ರದಾಯಿಕ ಯಕ್ಷಗಾನದ ಪದ(ಹಾಡು)ಗಳ ಪ್ರತ್ಯೇಕ ಪ್ರಯೋಗಗಳೂ ನಡೆದಿವೆ. ಎಲ್ಲವೂಗಳಿಗಿಂತ ವಿಭಿನ್ನ ವಿನೂತನ ಪ್ರಯೋಗ ಈ ಯಕ್ಷ ಸಂಗೀತ. ಭಾಗವತಿಕೆ, ಚೆಂಡೆ, ಮದ್ದಳೆ ನಿನಾದದೊಂದಿಗೆ ಕನ್ನಡದ ಪ್ರಸಿದ್ಧ ಸಾಹಿತಿಗಳ ರಚನೆಗಳನ್ನು ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಯತ್ನ ಇದು. ಯಕ್ಷಗಾನ ಪ್ರಿಯರಿಗೆ ಕನ್ನಡದ ಕವಿ-ಕಾವ್ಯ ಪರಿಚಯ, ಯಕ್ಷಗಾನ ತಿಳಿಯದವರಿಗೆ ಭಾಗವತಿಕೆಯ ಸಿರಿ-ಸೌಂದರ್ಯ,ರಾಗ-ಸೌಂದರ್ಯ ಪರಿಚಯ ಮಾಡುವ ಪ್ರಯತ್ನ. ಬಯಲಾಟ, ತಾಳ ಮದ್ದಳೆಗಳಿಗೆ ಸೀಮಿತವಾಗಿದ್ದ ಯಕ್ಷಗಾನ ಹಿಮ್ಮೇಳವನ್ನು ಪ್ರತ್ಯೇಕವಾಗಿ ಬೆಳೆಸುವ ಯತ್ನ ಯಕ್ಷ ಸಂಗೀತ. ಸುಗಮ ಸಂಗೀತದ ಬಳಿಕ ಏನು? ಎಂಬ ಪ್ರಶ್ನೆಗೆ ಶೇಖರ ಅಜೆಕಾರು ಅವರ ಉತ್ತರ..................!!!

No comments: